ವೈಎಸ್ಎಸ್ ದೇಶದಾದ್ಯಂತ ಕೋವಿಡ್-19 ಪರಿಹಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ

26 ಮೇ, 2021

ನಲ್ಮೆಯ ದಿವ್ಯ ಆತ್ಮರೇ,

ಕೋವಿಡ್-19 ಪಿಡುಗಿನ ಎರಡನೆಯ ಅಲೆ, ಇಡೀ ಭಾರತವನ್ನೇ ಅಭೂತಪೂರ್ವ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆ. ದೇಶವು ಪ್ರಮುಖ ಸವಾಲುಗಳಾದ ವೈದ್ಯಕೀಯ ಸೌಲಭ್ಯದ ಕೊರತೆಗಳು, ಉಪಕರಣಗಳು, ವೈದ್ಯಕೀಯ ಸರಬರಾಜುಗಳು, ಒತ್ತಡ ಪೂರ್ವಕ ಮತ್ತು ಅನೇಕ ವೇಳೆ ಜೀವ-ಬೆದರಿಕೆಯಲ್ಲಿರುವವರ ಅವಶ್ಯಕತೆಗಳನ್ನು ಪೂರೈಸುವಲ್ಲಿ, ವೈಯಕ್ತಿಕ ಉಪಶಮನ ನೀಡುವಲ್ಲಿ ಅಸಹಾಯಕತೆ ಇವುಗಳನ್ನು ಪರಿಹರಿಸಲು ಹೋರಾಡುತ್ತಿದೆ. ಕೋವಿಡ್-19 ರ ಪ್ರಭಾವದಿಂದಾಗಿ ಪ್ರೀತಿಪಾತ್ರರ ಆಗಲಿಕೆ, ಆದಾಯದ ಕೊರತೆ ಮತ್ತು ಪ್ರತಿಯೊಬ್ಬರ ಕ್ಷೇಮ ಹಾಗೂ ಆರೋಗ್ಯದ ಬಗ್ಗೆ ಇರುವ ಅನಿಶ್ಚತತೆ ಇವುಗಳ ನೇರ ಪ್ರಭಾವದಿಂದ ಕೆಲವರು ಮಾತ್ರ ಉಳಿದುಕೊಂಡಿದ್ದಾರೆ. ಅಂತಹ ನಷ್ಟಗಳನ್ನು ಅನುಭವಿಸಿದ ಎಲ್ಲರಿಗಾಗಿ ನಮ್ಮ ಹೃದಯ ಮರುಕ ಪಡುತ್ತದೆ. ಅವರೆಲ್ಲರಲ್ಲೂ ಜಗನ್ಮಾತೆಯ ಸಾಂತ್ವನ ಭರಿತ ಪ್ರೇಮ ತುಂಬಲಿ ಎಂದು ಆಳವಾಗಿ ಪ್ರಾರ್ಥಿಸುತ್ತೇವೆ.

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ, ಈ ವಿಷಮಸ್ಥಿತಿಯಲ್ಲಿ ವಸ್ತು ಸಹಾಯ ಹಾಗೂ ನೊಂದವರಿಗೆ ಸೇವೆ ಅದರಲ್ಲೂ ದೌರ್ಭಾಗ್ಯವಂತರಿಗೆ ಹಾಗೂ ದುರ್ಲಭರಿಗೆ ಸಹಾಯ ಮಾಡುವಲ್ಲಿ ದೇಶದಾದ್ಯಂತದ ಪ್ರಯತ್ನಗಳಲ್ಲಿ ಕೈ ಜೋಡಿಸಿದೆ. ಪರಿಹಾರ ಕಾರ್ಯಕ್ರಮಗಳು 20 ರಾಜ್ಯಗಳಲ್ಲಿ 25ಕ್ಕೂ ಹೆಚ್ಚು ನಗರಗಳಲ್ಲಿ ನಡೆದಿದ್ದು, ಪ್ರತಿನಿತ್ಯ ಇನ್ನು ಹೆಚ್ಚಿನ ನಗರಗಳು ಇದಕ್ಕೆ ಸೇರಿಕೊಳ್ಳುತ್ತಿವೆ.

ನಮ್ಮ ದೇಶದ ಈ ನಿರ್ಣಾಯಕ ಸಮಯದಲ್ಲಿ, ನಾವು ಈಗ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು, ಮತ್ತು ನಮ್ಮ ನಿರಂತರ ಪ್ರಯತ್ನದಲ್ಲಿ ಮುಂದೆ ಅಯೋಜಿಸಿರುವ ಪರಿಹಾರ ಕಾರ್ಯಕ್ರಮಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇವೆ.

ವಸ್ತುಗಳ ಪೂರೈಕೆ ಮತ್ತು ಸಹಾಯ

ನಾವು ನಮ್ಮ ಆಶ್ರಮಗಳು, ಕೇಂದ್ರಗಳು ಮತ್ತು ಮಂಡಳಿಗಳನ್ನು ನಮ್ಮ ಸಹಾಯ ಕೇಂದ್ರಗಳನ್ನಾಗಿ ಉಪಯೋಗಿಸುತ್ತಿದ್ದೇವೆ. ಈ ಪ್ರಯತ್ನಗಳು ಅವಶ್ಯಕತೆಯುಳ್ಳ ವ್ಯಕ್ತಿಗಳು ಹಾಗೂ ಕುಟುಂಬಗಳನ್ನು ನೇರವಾಗಿ ತಲಪುತ್ತಿವೆ. ಜೊತೆಗೆ ಆಸ್ಪತ್ರೆಗಳು ಮತ್ತು ಕೋವಿಡ್-19 ರೋಗಿಗಳ ಆರೈಕೆ ಮತ್ತು ಆರೋಗ್ಯಕ್ಕೆ ಸಹಾಯ ಮಾಡುತ್ತಿರುವ ಆಸ್ಪತ್ರೆಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಬೆಂಬಲ ನೀಡುತ್ತಿದ್ದೇವೆ.ವೈ ಎಸ್ ಎಸ್ ಪ್ರಯತ್ನಗಳು ಹೀಗಿವೆ:

ರಾಂಚಿ ಯೋಗದಾ ಸತ್ಸಂಗ ಸೇವಾಶ್ರಮ ಸಿಬ್ಬಂದಿ ಅಂಬುಲೆನ್ಸ್ ಹಾಗೂ ಶವ ವಾಹನಗಳ ಜೊತೆಯಲ್ಲಿ
ರಾಜಮುಂಡ್ರಿಯಲ್ಲಿ ಸ್ವಯಂಸೇವಕರು ಪಿಪಿಇ ಕಿಟ್ಟುಗಳಲ್ಲಿ, ಕೋವಿಡ್ ರೋಗಿಗಳಿಗೆ ಅವಶ್ಯಕ ವಸ್ತುಗಳು ಮತ್ತು ಆಹಾರಗಳನ್ನು ಒದಗಿಸುತ್ತಿರುವುದು.
  • ನಾವು ಹೆಚ್ಚು ಹಾಸಿಗೆಗಳು, ಗಾಲಿಕುರ್ಚಿಗಳು, ಜೀವದಾಯಕ ಔಷಧಗಳು ಇವುಗಳನ್ನು ಒದಗಿಸುತ್ತಿದ್ದೇವೆ ಮತ್ತು ಬೀಪಾಪ್ಯ ಯಂತ್ರಗಳು, non-invasive ವೆಂಟಿಲೇಟರ್ ಆಕ್ಸಿಜನ್ ಕೊನ್ಸೆಂಟ್ರೇಟರ್ ಗಳನ್ನು ಅವುಗಳ ಕೊರತೆ ಇರುವ ಆಸ್ಪತ್ರೆಗಳಿಗೆ ನೀಡುತ್ತಿದ್ದೇವೆ. ಇವುಗಳನ್ನು ರಾಂಚಿ, ಕೊಯಿಮತ್ತೂರು, ಮಧುರೈ, ಮುಂಬೈ, ನಾಗಪುರ, ಸಿರಾಂಪುರ, ಹರಿದ್ವಾರ, ವೆಲ್ಲೂರು ಮತ್ತು ವಿಜಯವಾಡಗಳಲ್ಲಿರುವ ಆಸ್ಪತ್ರೆಗಳಿಗೆ ಹಂಚಲಾಗುತ್ತಿದೆ.
  • ನಾವು ಪ್ರಮುಖ ಅತ್ಯಅವಶ್ಯಕ ಸರಬರಾಜುಗಳಾದ, ಔಷಧಿಗಳು, ಪಲ್ಸ್ ಆಕ್ಸಿಮೀಟರ್, ಪಿಪಿಇ ಕಿಟ್ಸ್ ಮುಖ ಕವಚಗಳು, ಫೇಸ್ ಶೀಲ್ಡ್, ವೈದ್ಯಕೀಯ ಗ್ಲೌಸಗಳು, ಸ್ಯಾನಿಟೈಸರ್, n95 ಮಾಸ್ಕ್ ಗಳು ಮತ್ತು ಥರ್ಮಾಮೀಟರ್ ಗಳನ್ನು, ಕೋವಿಡ್ 19 ರೋಗಿಗಳ ನೇರ ಸೇವೆ ಮಾಡುತ್ತಿರುವ ಆದ್ಯ ವೈದ್ಯಕೀಯ ಸಿಬ್ಬಂದಿ ಹಾಗೂ ಸ್ವಯಂಸೇವಕರಿಗೆ ಒದಗಿಸುತ್ತಿದ್ದೇವೆ. ನಾವು ಈ ಪರಿಹಾರ ಕಾರ್ಯಕ್ರಮವನ್ನು ದಕ್ಷಿಣೇಶ್ವರ, ದ್ವಾರಾಹಟ್‌, ಅರಸೀಕೆರೆ, ಬಳ್ಳಾರಿ, ಬೆಂಗಳೂರು, ಚಂದೀಗಡ, ಚೆನ್ನೈ, ಕೊಯಮತ್ತೂರು, ಲಖನೌ, ಮಂಗಳೂರು, ಮೈಸೂರು, ರಾಯಪುರ ಮತ್ತು ತಂಜಾವೂರುಗಳಿಗೂ ವಿಸ್ತರಿಸುತ್ತಿದ್ದೇವೆ.
  • ದ್ವಾರಾಹಟ್ನ ಒಂದು ಸಣ್ಣ ಸ್ಥಳೀಯ ಆಸ್ಪತ್ರೆಯಲ್ಲಿ ರೋಗಿಗಳನ್ನು ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ಹತ್ತಿರದ ಹಲದವಾನಿಯ ದೊಡ್ಡ ಆಸ್ಪತ್ರೆಗೆ ರವಾನಿಸಲು ಅತಿ ಅವಶ್ಯಕವಾಗಿದ್ದ ಅಂಬುಲೆನ್ಸ್ ಅನ್ನು ಹೊಂದಿರಲಿಲ್ಲ .ಈ ಕೊರತೆಯನ್ನು ತುಂಬಲು ನಾವು ಅವಶ್ಯವಾದ ಅಂಬುಲೆನ್ಸ್ ನಿಶ್ಚಿತ ಸಲಕರಣೆಗಳನ್ನು ಅಳವಡಿಸಿದ ವ್ಯಾನ್ ಒಂದನ್ನು ಖರೀದಿಸಿದ್ದೇವೆ.
  • ಸರ್ಕಾರಿ ಆಸ್ಪತ್ರೆಗಳಿಗೆ ಅತೀ ಅವಶ್ಯವಾದ ಬಿಸಿ ನೀರಿನ ವಿತರಣಾ ಸಲಕರಣೆಯ ವ್ಯವಸ್ಥೆಯನ್ನು ಉಡುಪಿಯಲ್ಲಿ ಮತ್ತು ಚೆನ್ನೈನಲ್ಲಿ ಶವದಚೀಲಗಳನ್ನು ಒದಗಿಸಿದ್ದೇವೆ.
  • ನಮ್ಮ ರಾಂಚಿ ಆಶ್ರಮದ ಆಸ್ಪತ್ರೆ ಮತ್ತು ವೈದ್ಯಕೀಯ ಸಿಬ್ಬಂದಿಯವರು ದಿನದ 24 ಗಂಟೆಗಳ ಆಂಬುಲೆನ್ಸ್ ಸೇವೆ, ಶವ ವಾಹನ ಸೇವೆ, ಆಕ್ಸಿಜನ್ ಸಿಲಿಂಡರ್ಗಳ ಮತ್ತು ವೈದ್ಯಕೀಯ ಕಿಟ್ಗಳ ಸರಬರಾಜು ಮತ್ತು ಉಚಿತ ವೈದ್ಯಕೀಯ ಸಲಹೆಗಳನ್ನು ನೀಡುತ್ತಿದ್ದಾರೆ.
  • ಅಗತ್ಯವಿರುವ ರೋಗಿಗಳಿಗೆ ಐಸಿಯು ವೆಚ್ಚ ಭರಿಸಲು ಮತ್ತು ಕೆಲವು ರೋಗಿಗಳ ಕುಟುಂಬಗಳಲ್ಲಿ ಮೃತನೊಬ್ಬನೇ ಆದಾಯ ಭರಿಸುವವನಾಗಿದ್ದರೆ ಅಂತಹವನ ಸಮೀಪದ ಸಂಬಂಧಿಗೆ ನಾವು ಆರ್ಥಿಕ ಸಹಾಯವನ್ನು ನೀಡುತ್ತಿದ್ದೇವೆ.
  • ಲಾಕ್ಡೌನ್ ನಿಂದಾಗಿ ಜೀವನೋಪಾಯವನ್ನು ಕಳೆದುಕೊಂಡಿರುವವರಿಗೆ ದಿನಸಿ ಸಾಮಗ್ರಿಗಳನ್ನು ಒದಗಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ರಾಂಚಿ, ದ್ವಾರಾಹಟ್, ದೆಹಲಿ ಮತ್ತು ಎನ್ ಸಿ ಆರ್, ಬಳ್ಳಾರಿ, ಬೆಂಗಳೂರು, ಬೆಳಗಾವಿ, ಹರಿದ್ವಾರ, ಹಾಸನ, ಕೈಗಾ, ಕಾರವಾರ, ಮಂಡ್ಯ, ಮುಜಾಫರ್ಪುರ , ಅಂಗೋಲೆ, ರಾಜಮುಂಡ್ರಿ ಮತ್ತು ತಿರುಕಝುಕುಂದೃಂಗಳಲ್ಲಿಯೂ ನಡೆಸಲಾಗುತ್ತಿದೆ.
ವೈ ಎಸ್ ಡಿ ಕೆ ಬೆಂಗಳೂರು ಭಕ್ತರು ಕೋವಿಡ್-19 ಪೀಡಿತ ಎಂಬತ್ತು ಬಡಕುಟುಂಬಗಳಿಗೆ ಹಂಚುವ ಸಲುವಾಗಿ ದಿನಸಿಯನ್ನು ಒಂದು ಸ್ವಯಂಸೇವಾ ಸಂಸ್ಥೆಗೆ ನೀಡುತ್ತಿರುವುದು.
ವೈದ್ಯಕೀಯ ಸರಬರಾಜುಗಳೊಡನೆ ಸ್ವಯಂಸೇವಕರು, ದ್ವಾರಾಹಟ್

ನಮ್ಮ ವೈ ಎಸ್ ಎಸ್ ಭಕ್ತರು ಮತ್ತು ಸ್ನೇಹಿತರು ಸಹಾಯ ಕಾರ್ಯದಲ್ಲಿ ಅಗತ್ಯವಿರುವ ಜನರನ್ನು ಗುರುತಿಸಿ, ಕೋವಿಡ್ 19 ಪರಿಹಾರ ತಂಡಕ್ಕೆ ಸಹಾಯ ಮಾಡಿದವರಿಗೆ ನಾವು ಆಭಾರಿಯಾಗಿದ್ದೇವೆ. ನಮ್ಮ ಪ್ರಿಯ ಗುರುದೇವರು ಕೊಟ್ಟಿರುವ ವೈ ಎಸ್ ಎಸ್ ನ ಗುರಿ ಮತ್ತು ಆದರ್ಶಗಳಲ್ಲಿ ಒಂದಾದ “ಸಮಸ್ತ ಮಾನವರನ್ನು ತನ್ನ ಬೃಹದ್‌ ಆತ್ಮವೇ ಎಂಬಂತೆ ಸೇವೆ ಸಲ್ಲಿಸುವುದು”, ಇದನ್ನು ಪ್ರತಿನಿಧಿಸುವ ಅವರ ನಿಸ್ವಾರ್ಥ ಸೇವೆಯ ಉತ್ಸಾಹವನ್ನು ನಾವು ಗುರುತಿಸುತ್ತೇವೆ.

ಕೊಯಿಮತ್ತೂರಿನಲ್ಲಿ ಆಕ್ಸಿ ಮೀಟರ್, ಥರ್ಮಾಮೀಟರ್, n95 ಮಾಸ್ಕ್ ಗಳು, ಪಿಪಿಇ ಕಿಟ್ ಮುಂತಾದವುಗಳನ್ನು ಶಿವಾಂಜಲಿ ಟ್ರಸ್ಟಿಗೆ ನೀಡಿರುವುದು.
ಚೆನ್ನೈನ ಕೋವಿಡ್-19 ಆಸ್ಪತ್ರೆಗೆ ಆಕ್ಸಿಜನ್ ಕಾನ್ಸೆಂಟ್ರೇಟರ್ ಕೊಡಲಾಯಿತು.
ನಾಗಪುರದ ಬಿಎಂಸಿಎಚ್ ಆಸ್ಪತ್ರೆಗೆ ಎರಡು ಬಿಪಿಎಪಿ ಮೆಷಿನಗಳನ್ನು ಕೊಡಲಾಯಿತು.
ವೀಲ್ಚೇರ್ ಗಳನ್ನು ಮತ್ತು ಸ್ಟ್ರೆಚ್ಚರ್ ಗಳನ್ನು ಮದುರೈ ತೊಪ್ಪೂರ್ ನಲ್ಲಿರುವ ಕೋವಿಡ್-19 ಆಸ್ಪತ್ರೆಗೆ ನೀಡಲಾಯಿತು.

ಪರಿಹಾರ ಕಾರ್ಯದಲ್ಲಿ ತೊಡಗಿರುವ ನಮ್ಮ ಇಬ್ಬರು ಭಕ್ತ ಸ್ವಯಂಸೇವಕರು ಈ ಕೆಳಗಿನ ಸಂದೇಶಗಳನ್ನು ಹಂಚಿಕೊಂಡಿರುತ್ತಾರೆ:

“ರೋಗ ಪೀಡಿತರಿಗೆ ಮತ್ತು ಆರೈಕೆದಾರರಿಗೆ ಸಹಾಯ ಮಾಡುತ್ತಾ ಅವರಿಗೆ ನಾವು ನಿಮ್ಮೊಡನೆ ಇದ್ದೇವೆ, ನಿಮಗೆ ಬೆಂಬಲ ನೀಡುತ್ತೇವೆ ಎಂದು ತಿಳಿಹೇಳುವುದು ಅತ್ಯಂತ ತೃಪ್ತಿಕರವಾಗಿದೆ.”

— ಕೆ ಬಿ ರಾಜಮುಂಡ್ರಿ

“ನಾವು ಹೊರಹೋಗಲು ಸಾಧ್ಯವಾಗಿ, ಬಿಪಾಪ್ ನಂತಹ ಜೀವ ಉಳಿಸುವ ಸಲಕರಣೆಗಳ ಅತ್ಯಂತ ಅವಶ್ಯಕತೆ ಇರುವ ಸರ್ಕಾರಿ ಆಸ್ಪತ್ರೆಗೆ ಸಹಾಯಹಸ್ತ ನೀಡಲು ಸಾಧ್ಯವಾದುದಕ್ಕೆ ನಾನು ಕೃತಜ್ಞನಾಗಿದ್ದೇನೆ. ವ್ಯತ್ಯಾಸ ತಂದಿರುವುದು ಮತ್ತು ನಮ್ಮ ಗುರುಗಳ ಕಾರ್ಯವೆಸಗುತ್ತಿರುವ ಹಸ್ತಗಳಾಗುವುದು ಅದೆಷ್ಟು ಅನುಗ್ರಹಕಾರಿ.”

— ಆರ್ ಆರ್ ನಾಗಪುರ

ನಿಮ್ಮ ಬೆಂಬಲ ತುಂಬ ಮಹತ್ವದ್ದು. ಕೋವಿಡ್ ಪರಿಹಾರದ ಅವಶ್ಯಕತೆ ಇನ್ನೂ ಸಮಾಪ್ತಿ ಆಗಿಲ್ಲ. ಜನರಿಗೆ ನಿಮ್ಮ ಸಹಾಯದ ಅಗತ್ಯವಿದೆ. ನಮ್ಮ ಪ್ರಯತ್ನಗಳನ್ನು ಮುಂದುವರೆಸಲು ನಾವು ನಮ್ಮ ಕೋವಿಡ್-19 ಪರಿಹಾರ ಕಾರ್ಯಗಳಿಗಾಗಿ ದೇಣಿಗೆ ನೀಡಲು ಇಚ್ಛೆ ಇರುವವರನ್ನು ಆಹ್ವಾನಿಸುತ್ತೇವೆ. ನಿಮ್ಮ ಹೃತ್ಪೂರ್ವಕ ಉದಾರ ಬೆಂಬಲ ನಮ್ಮ ಸೇವಾಕಾರ್ಯವನ್ನು ಸಾಧ್ಯಗೊಳಿಸುತ್ತದೆ. ಇದರ ಜೊತೆಗೆ ಅಷ್ಟೇ ಮುಖ್ಯವಾಗಿ, ಅಗತ್ಯವಿರುವವರಿಗಾಗಿ ಪ್ರಾರ್ಥಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.ನಮ್ಮ ಗುರುದೇವರು ಪ್ರಾರ್ಥನೆಯ ಸರಿಯಾದ ವಿಧಾನವನ್ನು ಬೋಧಿಸಿರುತ್ತಾರೆ ಮತ್ತು ನಮ್ಮ ಪ್ರಾರ್ಥನೆಗಳು ವಿಶೇಷವಾಗಿರುತ್ತವೆ. ಅತ್ಯಂತ ಬೇಡಿಕೆ ಇರುವ ಈ ಸಮಯದಲ್ಲಿ ವೈಎಸ್ ಎಸ್ ಸನ್ಯಾಸಿಗಳು ದಿನನಿತ್ಯ 9.40 ರಿಂದ 10 ಭಾರತೀಯ ಕಾಲಮಾನ ವರೆಗೆ ನಡೆಯುವ ಆನ್ಲೈನ್ ಆರೋಗ್ಯಕಾರಿ ಪ್ರಾರ್ಥನೆಗಳ ಜೊತೆಗೆ ತಮ್ಮ ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸುತ್ತಾರೆ. ಸಾಧ್ಯವಾದಲ್ಲಿ ದಯಮಾಡಿ ಭಾಗವಹಿಸಿ.

ನಮ್ಮ ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರು ಹೇಳಿರುತ್ತಾರೆ. “ಪ್ರತಿದಿನ ನಿಮ್ಮ ಪರಿಸರದಲ್ಲಿ ದೈಹಿಕವಾಗಿ, ಮಾನಸಿಕವಾಗಿ ಅಥವಾ ಆಧ್ಯಾತ್ಮಿಕವಾಗಿ ರೋಗ ಪೀಡಿತರಾಗಿರುವ ಯಾರನ್ನಾದರೂ ನಿಮ್ಮ ಸ್ವಂತ ಅಥವಾ ನಿಮ್ಮ ಕುಟುಂಬದವರಿಗೆ ಸಹಾಯ ಮಾಡುವ ರೀತಿಯಲ್ಲಿ ಉದ್ಧರಿಸಲು ಪ್ರಯತ್ನಿಸಿ. ಆಗ ಜೀವನದ ರಂಗವೇದಿಕೆದಲ್ಲಿ ನಿಮ್ಮಪಾತ್ರ ಯಾವುದೇ ಆಗಿರಲಿ, ಅದನ್ನು ಎಲ್ಲ ವಿಧಿಗಳ ಸೂತ್ರಧಾರನಾದ ಭಗವಂತನು ನಿರ್ದೇಶಿಸಿದ ರೀತಿಯಲ್ಲಿ ಸಮರ್ಪಕವಾಗಿ ನಿರ್ವಹಿಸುತ್ತಿರುವಿರಿ ಎಂಬುದರ ಅರಿವು ನಿಮಗಾಗುವುದು.”

ನಾವು ಎದುರಿಸುತ್ತಿರುವ ಸವಾಲುಗಳನ್ನು ಜಯಿಸಲು ಬೆಂಬಲ ಮತ್ತು ಸಹಾಯಕ್ಕಾಗಿ ನಮ್ಮ ಒಟ್ಟಾದ ಪ್ರಯತ್ನಗಳಲ್ಲಿ ಕೈಜೋಡಿಸುವಂತೆ ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಆಹ್ವಾನಿಸುತ್ತೇವೆ.ಭಗವಂತ ಮತ್ತು ಗುರುಗಳು ನಮ್ಮ ಹೃದಯಪೂರ್ವಕ ಪ್ರಾರ್ಥನೆಗಳನ್ನು ಮತ್ತು ಲೋಕೋಪಕಾರಿ ಪರಿಹಾರ ಕಾರ್ಯಗಳನ್ನು ತಮ್ಮ ಅನುಕಂಪ ಭರಿತ ಆರೋಗ್ಯಕಾರಿ ಬೆಳಕು ಮತ್ತು ದಿವ್ಯ ಪ್ರೇಮಗಳಿಂದ ತುಂಬಲಿ.

ದಿವ್ಯ ಸ್ನೇಹದೊಂದಿಗೆ,

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ

ಸೇವಾ ಕಾರ್ಯಗಳಿಗಾಗಿ ದೇಣಿಗೆ ನೀಡಲು ಬಯಸಿದಲ್ಲಿ ದಯಮಾಡಿ ಆನ್ಲೈನ್ ದೇಣಿಗೆ ನೀಡಲು ಪರಿಗಣಿಸಿ

ದಯಮಾಡಿ ಗಮನಿಸಿ, ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಆದಾಯ ತೆರಿಗೆ ಅಧಿನಿಯಮ 1961ರಲಿನ ನಿಬಂಧನೆಯ ಅಡಿಯಲ್ಲಿ ಒಂದು ಧಾರ್ಮಿಕ ಸಹಕಾರಿ ಸಂಘ ಎಂದು ಪರಿಗಣಿಸಲ್ಪಟ್ಟಿದೆ.ಈ ಸೊಸೈಟಿಗೆ ನೀಡುವ ದೇಣಿಗೆಗಳು (PAN: AAATYO283H) ಮೇಲೆ ಹೇಳಿದ ಅಧಿನಿಯಮದ ವಿಭಾಗ 80-G ಪ್ರಕಾರ ಭಾರತದ ಆದಾಯ ತೆರಿಗೆಯಲ್ಲಿ ಕಡಿತಗೊಳ್ಳಬಹುದಾಗಿದೆ.

ದೇಣಿಗೆ ವಿಚಾರದಲ್ಲಿ ಅಥವಾ ನಮ್ಮ ಪರಿಹಾರ ಕಾರ್ಯಗಳ ಬಗ್ಗೆ ಏನಾದರೂ ಪ್ರಶ್ನೆಗಳು ಇದ್ದಲ್ಲಿ ದಯಮಾಡಿ ರಾಂಚಿ ಸಹಾಯ ವೇದಿಕೆಯನ್ನು ಇಮೇಲ ಮೂಲಕ Email:helpdesk@yssi.org, ಅಥವಾ ಫೋನ Phone:+91(651)6655555 ಮುಖಾಂತರ ಸಂಪರ್ಕಿಸಬಹುದಾಗಿದೆ. (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ)

Media Coverage of Charitable Activities

Share this on